ಡಿಜಿಟಲ್ ಕ್ಯಾಮೆರಾ ಮೋಡಿ - ಕ್ಲಿಕ್ ಮಾಡಿ ನೋಡಿ ಟಿ ಜಿ ಶ್ರೀನಿಧಿಯವರು ಬರೆದ ಪುಸ್ತಕ. ಇದು ಫೋಟೋಗ್ರಾಫಿ ಬಗೆಗಿನ ಪುಸ್ತಕ. ಈ ಪುಸ್ತಕ ಫೋಟೋ ತೆಗೆಯುವ ಹವ್ಯಾಸ ಉಳ್ಳವರಿಗಾಗಿ ಮಾಹಿತಿ ನೀಡುವ ಕೈಪಿಡಿಯಂತಿದೆ. ಫೋಟೋ ತೆಗೆಯಬೇಕಾದಲ್ಲಿ ಫೋಟೋಗ್ರಾಫಿ ಕಲಿಯಬೇಕಾದ ಕಾಲ ಹಿಂದೆ ಸರಿದು ನವನವೀನ ತಂತ್ರಜ್ಞಾನದ ಅಭಿವೃದ್ಧಿಯಾಗಿ ಕ್ಯಾಮೆರಾ ಇದ್ದಲ್ಲಿ ಯಾರೂ ಫೋಟೋ ತೆಗೆಯಬಹುದಾದ ಸಂದರ್ಭ ಸೃಷ್ಟಿಯಾಗಿದೆ. ಕ್ಯಾಮೆರಾಗಳ ವಿಧ, ಲೆನ್ಸ್ ಉಪಯೋಗ, ಪಾಯಿಂಟ್ ಅಂಡ್ ಶೂಟ್ ಝೂಮ್ ಬಳಕೆ ಮುಂತಾಗಿ ವಿವರವಾಗಿ ತಿಳಿಸುವ ಕೃತಿಯಿದು. ಫೋಟೋ ತೆಗೆಯುವಲ್ಲಿ ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳನ್ನು ತಿಳಿಸುತ್ತ ಡಿಜಿಟಲ್ ಕ್ಯಾಮೆರಾದ ವೈಶಿಷ್ಟ್ಯವನ್ನು ಎತ್ತಿಹಿಡಿಯಲಾಗಿದೆ. ಇನ್ನಿತರ ಕ್ಯಾಮೆರಾ ಬಳಕೆ ಬಗ್ಗೆ ಮಾಹಿತಿಯಿದ್ದು ಇಂದಿನ ದಿನಗಳಲ್ಲಿ ಹೆಚ್ಚು ಉಪಯೋಗಕ್ಕೆ ಬರುವ ಪುಸ್ತಕವಿದು. == ಟಿ ಜಿ ಶ್ರೀನಿಧಿ ಅವರ ಪುಸ್ತಕಗಳು == ಹಾರುವ ಕನಸನು ಕಂಡವರು, ೨೦೦೩ ಅಂತರಿಕ್ಷದ ಅದ್ಭುತಗಳು, ೨೦೦೫ ಆಫೀಸ್ ೨೦೦೩, ೨೦೦೮ ವೆಬ್ ವಿಹಾರ, ೨೦೦೮ ಅವಕಾಶ ಅಪಾರ, ೨೦೦೮ ತಿನ್ನಲಾಗದ ಬಿಸ್ಕತ್ತು ನುಂಗಲಾಗದ ಟ್ಯಾಬ್ಲೆಟ್ಟು, ೨೦೧೧ ಫ್ಲಾಪಿಯಿಂದ ಫೇಸ್‌ಬುಕ್‌ವರೆಗೆ, ೨೦೧೨ ಕಂಪ್ಯೂಟರ್ ಪ್ರಪಂಚ, ೨೦೧೩ ಕಂಪ್ಯೂಟರ್ ಕನ್ನಡ ಕೆ. ಪಿ. ರಾವ್, ೨೦೧೩ ಡಿಜಿಟಲ್ ಕ್ಯಾಮೆರಾ ಮೋಡಿ - ಕ್ಲಿಕ್ ಮಾಡಿ ನೋಡಿ (ಪುಸ್ತಕ) == ಬಾಹ್ಯ ಸಂಪರ್ಕ == ಟಿ ಜಿ ಶ್ರೀನಿಧಿಯವರ ವಿಕಿಪೀಡಿಯ ಟಿ ಜಿ ಶ್ರೀನಿಧಿಯವರ ಪುಸ್ತಕಗಳು ಟಿ ಜಿ ಶ್ರೀನಿಧಿಯವರ ಬ್ಲಾಗ್